• Home
  • Uncategorized
  • ಗೋವಾ ರಾಜ್ಯದ ಲಾಟರಿ ಮಾರಾಟ; ವ್ಯಕ್ತಿ ವಶಕ್ಕೆ
Image

ಗೋವಾ ರಾಜ್ಯದ ಲಾಟರಿ ಮಾರಾಟ; ವ್ಯಕ್ತಿ ವಶಕ್ಕೆ

Share this...

ಕಾರವಾರ: ನಗರದ ಮೀನು ಮಾರುಕಟ್ಟೆಯಲ್ಲಿ ಗೋವಾ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗೋವಾ ಮೂಲದ ವ್ಯಕ್ತಿಯೊಬ್ಬನನ್ನು ಕಾರವಾರ ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೋವಾ ರಾಜ್ಯದ ಪೊಂಡಾದ ಗಣೇಶೋತ್ಸವ ಸಮಿತಿಯೊಂದಕ್ಕೆ ಸಂಬಂಧಿಸಿದ ಲಾಟರಿ ಟಿಕೆಟ್‌ಗಳನ್ನು ಕಾರವಾರದಲ್ಲಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ₹500 ಮುಖಬೆಲೆಯ ಟಿಕೆಟ್‌ಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದ್ದು, ದೊಡ್ಡ ಮೊತ್ತದ ಬಹುಮಾನವಿದೆ ಎಂಬ ಕಾರಣಕ್ಕೆ ಸಾರ್ವಜನಿಕರು ಟಿಕೆಟ್ ಖರೀದಿಸಲು ಮುಗಿಬಿದ್ದಿದ್ದರು ಎನ್ನಲಾಗಿದೆ.

ಈ ಕುರಿತು ಮಾಹಿತಿ ಪಡೆದ ಕಾರವಾರ ಶಹರ ಠಾಣೆ ಪೊಲೀಸರು ಮೀನು ಮಾರುಕಟ್ಟೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ, ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಗೋವಾ ಮೂಲದ ವಿನೋದ ಸುರೇಶ ವಾಂಗೆಲೆ (35-40) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದ್ದು, ಗೋವಾ ಲಾಟರಿ ಟಿಕೆಟ್‌ಗಳನ್ನು ಕಾರವಾರದಲ್ಲಿ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share this...

Releated Posts

ಕಾರವಾರ ಮೀನು ಮಾರುಕಟ್ಟೆಯಲ್ಲಿ ಸತ್ಯನಾರಾಯಣ ಪೂಜೆ

Share this...

Share this… Facebook Whatsapp ಕಾರವಾರ: ಜಿಲ್ಲಾ ಮಹಿಳಾ ಮೀನುಗಾರರ ಅಭಿವೃದ್ಧಿ ಸಂಘದ ವತಿಯಿಂದ ನಗರದ ಮೀನು ಮಾರುಕಟ್ಟೆಯಲ್ಲಿ ಶನಿವಾರ ಶ್ರೀ ಸತ್ಯನಾರಾಯಣ ಪೂಜಾ…

Share this...
ByByNaik Sep 5, 2026

अंकिता करमळकर या विद्यार्थिनीने वकिली परीक्षेत चांगल्या गुणांनी उत्तीर्ण झाल्याबद्दल जोयडा तालुक्यातून करण्यात येत आहे कौतुक.

Share this...

Share this… Facebook Whatsapp रामनगर येथील विद्यार्थिनी अंकिता अनंत करमळकर हिने धारवाड येथील सिद्धाप्पा कांबळे कॉलेज येथे शिक्षण…

Share this...
ByByNaik Sep 5, 2026

गोवा राज्यातील मोलम डिजिटल चेक नाका पडला बंद.

Share this...

Share this… Facebook Whatsapp कर्नाटकातून अनमोड घाट मार्गे गोवा राज्यात जाणाऱ्या वाहनांची कागदपत्राची तपासणी करण्यासाठी मोलम या ठिकाणी…

Share this...
ByByNaik Sep 4, 2026

ಟೆಂಪೊ ಟ್ರಾವೆಲರ್ ಪಲ್ಟಿ ; ಪ್ರಯಾಣಿಕರು ಗಂಭೀರ.

Share this...

Share this… Facebook Whatsapp ಕಾರವಾರ: ಎದುರಿನಿಂದ ಬಂದ ಸಾಂಟ್ರೋ ಕಾರನ್ನು ತಪ್ಪಿಸಲು ಹೋಗಿದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟಿಟಿ…

Share this...
ByByNaik Sep 3, 2026

Leave a Reply

Your email address will not be published. Required fields are marked *

Scroll to Top