• Home
  • Uncategorized
  • ಟೆಂಪೊ ಟ್ರಾವೆಲರ್ ಪಲ್ಟಿ ; ಪ್ರಯಾಣಿಕರು ಗಂಭೀರ.
Image

ಟೆಂಪೊ ಟ್ರಾವೆಲರ್ ಪಲ್ಟಿ ; ಪ್ರಯಾಣಿಕರು ಗಂಭೀರ.

Share this...

ಕಾರವಾರ: ಎದುರಿನಿಂದ ಬಂದ ಸಾಂಟ್ರೋ ಕಾರನ್ನು ತಪ್ಪಿಸಲು ಹೋಗಿದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟಿಟಿ ವಾಹನ ರಸ್ತೆ ಬದಿಗೆ ಪಲ್ಟಿಯಾದ ಘಟನೆ ಗುರುವಾರ ಮಧ್ಯಾಹ್ನ ತಾಲೂಕಿನ ಹೊಟೆಗಾಳಿ ಸಮೀಪ ನಡೆದಿದೆ.

ಹೈದರಾಬಾದ್‌ನಿಂದ ಬುಧವಾರ ಪ್ರವಾಸಕ್ಕೆ ಹೊರಟಿದ್ದ 11 ಮಂದಿ ಪ್ರವಾಸಿಗರು ತಿರುಮಲ ಟ್ರಾವೆಲ್ಸ್‌ನ TS 08 UA 1072 ನೋಂದಣಿ ಸಂಖ್ಯೆಯ ಟಿಟಿ ವಾಹನದಲ್ಲಿ ದಾಂಡೇಲಿಯಿಂದ ಕಾರವಾರ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಗುರುವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಹೊಟೆಗಾಳಿ ಸಮೀಪ ಎದುರಿನಿಂದ ಸಾಂಟ್ರೋ ಕಾರೊಂದು ಬಂದಿದ್ದು, ಅದನ್ನು ತಪ್ಪಿಸಲು ಹೋಗಿದಾಗ ಟಿಟಿ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ ಎಂದು ಪ್ರವಾಸಿಗ ವಿಜಯಕುಮಾರ ನಾಗಯ್ಯ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅಪಘಾತದಲ್ಲಿ ವಾಹನದಲ್ಲಿದ್ದ 11 ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಗೊಂಡವರನ್ನು ಸ್ಥಳೀಯರ ನೆರವಿನಿಂದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share this...

Releated Posts

ಕಾರವಾರ ಮೀನು ಮಾರುಕಟ್ಟೆಯಲ್ಲಿ ಸತ್ಯನಾರಾಯಣ ಪೂಜೆ

Share this...

Share this… Facebook Whatsapp ಕಾರವಾರ: ಜಿಲ್ಲಾ ಮಹಿಳಾ ಮೀನುಗಾರರ ಅಭಿವೃದ್ಧಿ ಸಂಘದ ವತಿಯಿಂದ ನಗರದ ಮೀನು ಮಾರುಕಟ್ಟೆಯಲ್ಲಿ ಶನಿವಾರ ಶ್ರೀ ಸತ್ಯನಾರಾಯಣ ಪೂಜಾ…

Share this...
ByByNaik Sep 5, 2026

अंकिता करमळकर या विद्यार्थिनीने वकिली परीक्षेत चांगल्या गुणांनी उत्तीर्ण झाल्याबद्दल जोयडा तालुक्यातून करण्यात येत आहे कौतुक.

Share this...

Share this… Facebook Whatsapp रामनगर येथील विद्यार्थिनी अंकिता अनंत करमळकर हिने धारवाड येथील सिद्धाप्पा कांबळे कॉलेज येथे शिक्षण…

Share this...
ByByNaik Sep 5, 2026

गोवा राज्यातील मोलम डिजिटल चेक नाका पडला बंद.

Share this...

Share this… Facebook Whatsapp कर्नाटकातून अनमोड घाट मार्गे गोवा राज्यात जाणाऱ्या वाहनांची कागदपत्राची तपासणी करण्यासाठी मोलम या ठिकाणी…

Share this...
ByByNaik Sep 4, 2026

ಅಂಬೇಡ್ಕರ್ ಸರ್ಕಲ್ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ; ಅನಾಹುತ ತಪ್ಪಿಸಿದ ಕ್ಷಿಪ್ರ ಕಾರ್ಯಾಚರಣೆ

Share this...

Share this… Facebook Whatsapp ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66ರ ಅಂಬೇಡ್ಕರ್ ಸರ್ಕಲ್ ಬಳಿ ಬುಧವಾರ ತಡರಾತ್ರಿ ಅನಿಲ ತುಂಬಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ…

Share this...
ByByNaik Sep 3, 2026

Leave a Reply

Your email address will not be published. Required fields are marked *

Scroll to Top