• Home
  • Uncategorized
  • ಗೋವಾದ ಮದ್ಯ ಅಕ್ರಮ ಸಾಗಾಟ: ಹುಬ್ಬಳ್ಳಿ ವ್ಯಕ್ತಿ ಬಂಧನ
Image

ಗೋವಾದ ಮದ್ಯ ಅಕ್ರಮ ಸಾಗಾಟ: ಹುಬ್ಬಳ್ಳಿ ವ್ಯಕ್ತಿ ಬಂಧನ

Share this...

ದಾಂಡೇಲಿ: ಅನಮೋಡ ತನಿಖಾ ಠಾಣೆ ವ್ಯಾಪ್ತಿಯಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ವಾಹನ ತಪಾಸಣೆ ವೇಳೆ ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಮದ್ಯ ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.

ಶುಕ್ರವಾರ ಮುಂಜಾನೆ ಸುಮಾರು 1.30ರ ವೇಳೆಗೆ ಅನಮೋಡ ತನಿಖಾ ಠಾಣೆಯ ಅಬಕಾರಿ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ, KA-25/EV-4199 ಸಂಖ್ಯೆಯ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ಪರಿಶೀಲಿಸಲಾಯಿತು. ಈ ವೇಳೆ ವಾಹನದಲ್ಲಿದ್ದ ಎರಡು ಏರ್ ಬ್ಯಾಗ್‌ಗಳಲ್ಲಿ 28.25 ಲೀಟರ್ ಗೋವಾ ರಾಜ್ಯದಲ್ಲಿ ತಯಾರಾದ ವಿವಿಧ ನಮೂನೆಯ ಮದ್ಯದ ಬಾಟಲಿಗಳು ಪತ್ತೆಯಾದವು.

ಈ ಸಂಬಂಧ ನವೀನ್ ಚೆನ್ನಯ್ಯ ದಾರ (ವಿನೋಬನಗರ, ಗದಗ ರಸ್ತೆ, ಹುಬ್ಬಳ್ಳಿ) ಎಂಬಾತನನ್ನು ಬಂಧಿಸಲಾಗಿದ್ದು, ಆತ ಗೋವಾ ರಾಜ್ಯದಿಂದ ತನ್ನ ಮನೆಗೆ ಮಾರಾಟ ಉದ್ದೇಶಕ್ಕಾಗಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದುದಾಗಿ ತಿಳಿದುಬಂದಿದೆ. ಆರೋಪಿಯಿಂದ ಮದ್ಯ ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿಕೊಂಡು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಜಪ್ತಿ ಮಾಡಲಾದ ದ್ವಿಚಕ್ರ ವಾಹನದ ಅಂದಾಜು ಮೌಲ್ಯ ₹60 ಸಾವಿರ ಹಾಗೂ ಮದ್ಯದ ಮೌಲ್ಯ ಸುಮಾರು ₹16,500 ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಮಾನ್ಯ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗದ ನಿರ್ದೇಶನ ಹಾಗೂ ಅಬಕಾರಿ ಉಪ ಆಯುಕ್ತರು ಉತ್ತರ ಕನ್ನಡ ಜಿಲ್ಲೆ, ಕಾರವಾರ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು. ಪ್ರಕರಣ ಪತ್ತೆ ಹಚ್ಚುವಿಕೆಯಲ್ಲಿ ಅಬಕಾರಿ ನಿರೀಕ್ಷಕ ಮಹೇಂದ್ರ ಎಸ್. ನಾಯ್ಕ್, ಮುಖ್ಯ ಪೇದೆಗಳಾದ ಸಂತೋಷ್ ಸುಬ್ಬಣ್ಣವರ್, ಅಲಿ ಸಾಬ್ ಅವರಾದಿ, ಪೇದೆ ಗಜಾನನ ನಾಯ್ಕ್ ಭಾಗವಹಿಸಿದ್ದರು. ಪ್ರಕರಣವನ್ನು ದಾಂಡೇಲಿ ವಲಯದ ಅಬಕಾರಿ ಉಪನಿರೀಕ್ಷಕ ಕರೆಪ್ಪ ಹೊಳೆನವರ್ ದಾಖಲಿಸಿಕೊಂಡಿದ್ದಾರೆ.

Share this...

Releated Posts

ಕಾರವಾರ ಮೀನು ಮಾರುಕಟ್ಟೆಯಲ್ಲಿ ಸತ್ಯನಾರಾಯಣ ಪೂಜೆ

Share this...

Share this… Facebook Whatsapp ಕಾರವಾರ: ಜಿಲ್ಲಾ ಮಹಿಳಾ ಮೀನುಗಾರರ ಅಭಿವೃದ್ಧಿ ಸಂಘದ ವತಿಯಿಂದ ನಗರದ ಮೀನು ಮಾರುಕಟ್ಟೆಯಲ್ಲಿ ಶನಿವಾರ ಶ್ರೀ ಸತ್ಯನಾರಾಯಣ ಪೂಜಾ…

Share this...
ByByNaik Sep 5, 2026

अंकिता करमळकर या विद्यार्थिनीने वकिली परीक्षेत चांगल्या गुणांनी उत्तीर्ण झाल्याबद्दल जोयडा तालुक्यातून करण्यात येत आहे कौतुक.

Share this...

Share this… Facebook Whatsapp रामनगर येथील विद्यार्थिनी अंकिता अनंत करमळकर हिने धारवाड येथील सिद्धाप्पा कांबळे कॉलेज येथे शिक्षण…

Share this...
ByByNaik Sep 5, 2026

गोवा राज्यातील मोलम डिजिटल चेक नाका पडला बंद.

Share this...

Share this… Facebook Whatsapp कर्नाटकातून अनमोड घाट मार्गे गोवा राज्यात जाणाऱ्या वाहनांची कागदपत्राची तपासणी करण्यासाठी मोलम या ठिकाणी…

Share this...
ByByNaik Sep 4, 2026

ಟೆಂಪೊ ಟ್ರಾವೆಲರ್ ಪಲ್ಟಿ ; ಪ್ರಯಾಣಿಕರು ಗಂಭೀರ.

Share this...

Share this… Facebook Whatsapp ಕಾರವಾರ: ಎದುರಿನಿಂದ ಬಂದ ಸಾಂಟ್ರೋ ಕಾರನ್ನು ತಪ್ಪಿಸಲು ಹೋಗಿದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟಿಟಿ…

Share this...
ByByNaik Sep 3, 2026
1 Comments Text
  • funmx says:
    Your comment is awaiting moderation. This is a preview; your comment will be visible after it has been approved.
    Stumbling upon this site felt like a breath of fresh air. The game library is massive and the slots keep me entertained for hours. I also noticed the promotions update regularly so there is always something new to try. Great community vibe and fair gameplay throughout. funmx
  • Leave a Reply

    Your email address will not be published. Required fields are marked *

    Scroll to Top