
ಕಾರವಾರ: ಜಿಲ್ಲಾ ಮಹಿಳಾ ಮೀನುಗಾರರ ಅಭಿವೃದ್ಧಿ ಸಂಘದ ವತಿಯಿಂದ ನಗರದ ಮೀನು ಮಾರುಕಟ್ಟೆಯಲ್ಲಿ ಶನಿವಾರ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು.
ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸರ್ವರ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಸುಶೀಲಾ ಹರಿಕಂತ್ರ, ಲೋಕಿ ಹರಿಕಂತ್ರ, ವಂದನಾ, ಪ್ರೇಮ, ಮೀರಾ, ಜಯಶ್ರೀ, ನೇಮಿ, ನಗರಸಭೆ ಮಾಜಿ ಅಧ್ಯಕ್ಷ ರವಿರಾಜ್ ಅಂಕೋಲೆಕರ್, ಚೇತನ್ ಹರಿಕಂತ್ರ, ರೋಷನ್ ಹರಿಕಂತ್ರ ಸೇರಿದಂತೆ ಮಹಿಳಾ ಮೀನುಗಾರರು, ನಗರಸಭೆಯ ಮಾಜಿ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.









