• Home
  • Uncategorized
  • ರಾಖಿಯ ಬಣ್ಣದಲ್ಲಿ ಮಿಂದೆದ್ದ ಕಡಲನಗರಿ

ರಾಖಿಯ ಬಣ್ಣದಲ್ಲಿ ಮಿಂದೆದ್ದ ಕಡಲನಗರಿ

Share this...

ತವರು ಮನೆಯತ್ತ ಗೃಹಿಣಿಯರ ಹೆಜ್ಜೆ; ಮಾರುಕಟ್ಟೆಯಲ್ಲಿ ರಾಖಿ ಖರೀದಿ ಭರಾಟೆ

ಕಾರವಾರ: ಅಣ್ಣ-ತಂಗಿಯರ ಪವಿತ್ರ ಬಾಂಧವ್ಯದ ಸಂಕೇತವಾದ ರಕ್ಷಾ ಬಂಧನ ಹಬ್ಬಕ್ಕೆ ಕಡಲನಗರಿ ಸಜ್ಜಾಗಿದೆ. ಹಬ್ಬದ ಮುನ್ನಾದಿನವೇ ನಗರದ ಸವಿತಾ ಸರ್ಕಲ್, ಹೆಂಜಾ ನಾಯ್ಕ ಸರ್ಕಲ್, ಗ್ರೀನ್ ಸ್ಟ್ರೀಟ್, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಕಾಜುಭಾಗ, ಕೋಡಿಭಾಗ, ಗಾಂಧೀಬಜಾರ್ ಹಾಗೂ ಬಸ್ ನಿಲ್ದಾಣ ರಸ್ತೆಯ ಮಾರುಕಟ್ಟೆಗಳಲ್ಲಿ ರಾಖಿ ಖರೀದಿ ಭರಾಟೆ ಜೋರಾಗಿದೆ.

ಛೋಟಾ ಭೀಮ್, ಡೋರೇಮಾನ್, ಸ್ಪೈಡರ್‌ಮ್ಯಾನ್‌ನಂತಹ ಕಾರ್ಟೂನ್ ರಾಖಿಗಳು ಹಾಗೂ ಲೈಟಿಂಗ್ ರಾಖಿಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಮುತ್ತು, ಕುಂದನ್, ಬೆಳ್ಳಿ-ಚಿನ್ನದ ಲೇಪಿತ ಫ್ಯಾನ್ಸಿ ರಾಖಿಗಳಿಗೂ ಬೇಡಿಕೆ ಹೆಚ್ಚಿದೆ. ರುದ್ರಾಕ್ಷಿ, ಶ್ರೀಚಂದನ ಹಾಗೂ ರೇಷ್ಮೆದಾರದ ಸಾಂಪ್ರದಾಯಿಕ ರಾಖಿಗಳನ್ನೂ ಗ್ರಾಹಕರು ಆಯ್ಕೆ ಮಾಡುತ್ತಿದ್ದಾರೆ.

ರಾಖಿಯೊಂದಿಗೆ ಸಿಹಿತಿಂಡಿ, ಚಾಕೊಲೇಟ್ ಹಾಗೂ ಡ್ರೈಫ್ರೂಟ್ಸ್ ಖರೀದಿಯೂ ಹೆಚ್ಚಾಗಿದೆ. ₹10ರಿಂದ ನೂರಾರು ರೂಪಾಯಿವರೆಗೆ ರಾಖಿಗಳು ಲಭ್ಯವಿದ್ದು, ವ್ಯಾಪಾರ ಉತ್ತಮವಾಗಿದೆ ಎಂದು ಶಂಕರಿ ಜನರಲ್ ಸ್ಟೋರ್ ಮಾಲೀಕಿ ಶ್ರೀಲಕ್ಷ್ಮೀ ತಿಳಿಸಿದ್ದಾರೆ.

ಹಬ್ಬದ ಹಿನ್ನೆಲೆಯಲ್ಲಿ ವಿವಾಹಿತ ಮಹಿಳೆಯರು ಸಹೋದರರಿಗೆ ರಾಖಿ ಕಟ್ಟಲು ತವರು ಮನೆಯತ್ತ ತೆರಳಲು ಸಿದ್ಧತೆ ನಡೆಸಿದ್ದು, ಬಾಲ್ಯದ ನೆನಪುಗಳು ಹಾಗೂ ಸಹೋದರ-ಸಹೋದರಿಯರ ಬಾಂಧವ್ಯದ ಸಂಭ್ರಮ ನಗರದಲ್ಲಿ ಹಬ್ಬದ ಕಳೆ ಹೆಚ್ಚಿಸಿದೆ.

Share this...

Releated Posts

ಕಾರವಾರ ಮೀನು ಮಾರುಕಟ್ಟೆಯಲ್ಲಿ ಸತ್ಯನಾರಾಯಣ ಪೂಜೆ

Share this...

Share this… Facebook Whatsapp ಕಾರವಾರ: ಜಿಲ್ಲಾ ಮಹಿಳಾ ಮೀನುಗಾರರ ಅಭಿವೃದ್ಧಿ ಸಂಘದ ವತಿಯಿಂದ ನಗರದ ಮೀನು ಮಾರುಕಟ್ಟೆಯಲ್ಲಿ ಶನಿವಾರ ಶ್ರೀ ಸತ್ಯನಾರಾಯಣ ಪೂಜಾ…

Share this...
ByByNaik Sep 5, 2026

अंकिता करमळकर या विद्यार्थिनीने वकिली परीक्षेत चांगल्या गुणांनी उत्तीर्ण झाल्याबद्दल जोयडा तालुक्यातून करण्यात येत आहे कौतुक.

Share this...

Share this… Facebook Whatsapp रामनगर येथील विद्यार्थिनी अंकिता अनंत करमळकर हिने धारवाड येथील सिद्धाप्पा कांबळे कॉलेज येथे शिक्षण…

Share this...
ByByNaik Sep 5, 2026

गोवा राज्यातील मोलम डिजिटल चेक नाका पडला बंद.

Share this...

Share this… Facebook Whatsapp कर्नाटकातून अनमोड घाट मार्गे गोवा राज्यात जाणाऱ्या वाहनांची कागदपत्राची तपासणी करण्यासाठी मोलम या ठिकाणी…

Share this...
ByByNaik Sep 4, 2026

ಟೆಂಪೊ ಟ್ರಾವೆಲರ್ ಪಲ್ಟಿ ; ಪ್ರಯಾಣಿಕರು ಗಂಭೀರ.

Share this...

Share this… Facebook Whatsapp ಕಾರವಾರ: ಎದುರಿನಿಂದ ಬಂದ ಸಾಂಟ್ರೋ ಕಾರನ್ನು ತಪ್ಪಿಸಲು ಹೋಗಿದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟಿಟಿ…

Share this...
ByByNaik Sep 3, 2026

Leave a Reply

Your email address will not be published. Required fields are marked *

Scroll to Top