ಕಾರವಾರ: ಇತ್ತೀಚೆಗೆ ಉಡುಪಿಯಲ್ಲಿ ನಡೆದ ಕೇನ್-ಇ-ಮಾಬೂನಿ ಶಿತೋ-ರ್ಯೂ ಕಂಪೀಟ್ 5.0 ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕಾರವಾರದ ಬಾಲಮಂದಿರ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಹಲವು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ಪ್ರೀತಮ್ ತೊಗುನಾಸಿ ಕುಮಿಟೆಯಲ್ಲಿ ಚಿನ್ನ ಹಾಗೂ ಕಟಾದಲ್ಲಿ ಬೆಳ್ಳಿ ಪದಕ ಪಡೆದರು. ಪ್ರೀತಮ್ ಪಟಗಾರ ಕುಮಿಟೆಯಲ್ಲಿ ಚಿನ್ನ, ರಿಷಿಕಾ ಗೌಡ ಕುಮಿಟೆ ಮತ್ತು ಕಟಾದಲ್ಲಿ ಬೆಳ್ಳಿ, ಓಂಕಾರ ಜುಗದರ್ ಕುಮಿಟೆ ಹಾಗೂ ಕಟಾದಲ್ಲಿ ಬೆಳ್ಳಿ, ಲೋಹಿತ್ ಮಡಿವಾಳ ಕುಮಿಟೆಯಲ್ಲಿ ಕಂಚು ಹಾಗೂ ಕಟಾದಲ್ಲಿ ಬೆಳ್ಳಿ, ಹರ್ಷ ಲಮಾಣಿ ಮತ್ತು ಆಯುಷ್ ನಾಯಕ ಕುಮಿಟೆ ಹಾಗೂ ಕಟಾದಲ್ಲಿ ಕಂಚಿನ ಪದಕ ಗಳಿಸಿದರು.
ಬ್ರೌನ್ ಬೆಲ್ಟ್ ವಿಭಾಗದಲ್ಲಿ ಪ್ರಥಮ್ ರಾವ್ ಹಾಗೂ ಮಹೇಶ್ ಭೋವಿ ಕುಮಿಟೆಯಲ್ಲಿ ಕಂಚಿನ ಪದಕ ಪಡೆದರು.
ಕಲರ್ ಬೆಲ್ಟ್ ವಿಭಾಗದಲ್ಲಿ ಆರಾಧ್ಯಾ ಮಾಲ್ಸೆಕರ್ ಕುಮಿಟೆಯಲ್ಲಿ ಚಿನ್ನ, ಶರ್ಮಿಷ್ಠಾ ತಳೇಕರ್ ಕುಮಿಟೆಯಲ್ಲಿ ಬೆಳ್ಳಿ ಹಾಗೂ ಕಟಾದಲ್ಲಿ ಚಿನ್ನ, ಆದಿಶ್ ಬಾಂದೇಕರ್ ಕುಮಿಟೆ ಮತ್ತು ಕಟಾದಲ್ಲಿ ಬೆಳ್ಳಿ, ವಿಭಾ ಎ., ಪ್ರಣವ್ ನಾಯ್ಕ ಹಾಗೂ ಅನ್ಶ್ ನಾರ್ವೇಕರ್ ಕುಮಿಟೆಯಲ್ಲಿ ಬೆಳ್ಳಿ ಪದಕ ಪಡೆದರು.
ಇದೇ ವಿಭಾಗದಲ್ಲಿ ಆರ್ಯಾಹಿ ಬಾಂದೇಕರ್ ಕುಮಿಟೆಯಲ್ಲಿ ಕಂಚು ಹಾಗೂ ಕಟಾದಲ್ಲಿ ಬೆಳ್ಳಿ, ಆದಿತ್ಯ ಚಿಪ್ಕರ್, ಧ್ರುವ ನಾಯ್ಕ, ನಿರ್ಮಯ್ ಕಿತ್ತೂರು ಹಾಗೂ ಅದ್ರುತಿ ಥೋಳಾರ್ ಕುಮಿಟೆಯಲ್ಲಿ ಕಂಚಿನ ಪದಕ ಗಳಿಸಿದರು. ಸೋಹಂ ಬಾಂದೇಕರ್ ಕುಮಿಟೆ ಹಾಗೂ ಕಟಾದಲ್ಲಿ ಕಂಚು ಮತ್ತು ನಂದನ್ ಚೌಗುಲೆ ಕುಮಿಟೆ ಹಾಗೂ ಕಟಾದಲ್ಲಿ ಕಂಚಿನ ಪದಕ ಪಡೆದರು.
ವಿದ್ಯಾರ್ಥಿಗಳ ಈ ಸಾಧನೆಗೆ ಗುರುಕುಲ ಕಲಾ ಪ್ರಗತಿ ಕೇಂದ್ರ ಕರಾಟೆ ಶಾಲೆಯ ಗುರು ಪ್ರದೀಪ್ ಬಾಂದೇಕರ್ ಅಭಿನಂದನೆ ಸಲ್ಲಿಸಿ, ವಿದ್ಯಾರ್ಥಿಗಳನ್ನು ಗೌರವಿಸಿ ಮುಂದಿನ ಸ್ಪರ್ಧೆಗಳಿಗೆ ಪ್ರೋತ್ಸಾಹಿಸಿದರು.









