• Home
  • Crime
  • ಕಾರವಾರದಲ್ಲಿ ಉದ್ಯಮಿ ಫ್ಲಾಟ್‌ಗಳ ಮೇಲೆ ಇಡಿ ದಾಳಿ
Image

ಕಾರವಾರದಲ್ಲಿ ಉದ್ಯಮಿ ಫ್ಲಾಟ್‌ಗಳ ಮೇಲೆ ಇಡಿ ದಾಳಿ

Share this...

ಕಾರವಾರ: ನಕಲಿ ದಾಖಲೆ ಸೃಷ್ಟಿಸಿ ಭೂಮಿ ಖರೀದಿ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಗೋವಾ ಮೂಲದ ಉದ್ಯಮಿಗೆ ಸೇರಿದ ಕಾರವಾರದ ನಾಲ್ಕು ಫ್ಲಾಟ್‌ಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ನಗರದ ಕೋಡಿಬಾಗದಲ್ಲಿರುವ ಅಬಕಾರಿ ಕಚೇರಿ ಎದುರಿನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿರುವ ನಾಲ್ಕು ಫ್ಲಾಟ್‌ಗಳ ಮೇಲೆ ಗೋವಾದಿಂದ ಆಗಮಿಸಿದ ಇಡಿ ಅಧಿಕಾರಿಗಳ ತಂಡ ಶೋಧ ನಡೆಸಿದೆ. ಆಸ್ತಿ ಖರೀದಿ ಹಾಗೂ ಹಣದ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿದುಬಂದಿದೆ.

ಮೂಲತಃ ಶಿವಮೊಗ್ಗದವನೆಂದು ಹೇಳಲಾಗಿರುವ ಸುಲೇಮಾನ್‌ ಖಾನ್‌ ಯಾನೆ ಸಿದ್ದಿಕ್‌ ಖಾನ್‌ ಸುಮಾರು ಐದು ವರ್ಷಗಳ ಕಾಲ ಕಾರವಾರದಲ್ಲಿ ನೆಲೆಸಿದ್ದ. ಬಳಿಕ ಗೋವಾಕ್ಕೆ ಸ್ಥಳಾಂತರಗೊಂಡಿದ್ದ. ಕಾರವಾರದಲ್ಲಿ ಆತನ ಕುಟುಂಬವೊಂದು ನೆಲೆಸಿತ್ತು ಎನ್ನಲಾಗಿದೆ.

ಗೋವಾದಲ್ಲಿ ಮೃತರ ಆಸ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ ಆರೋಪ ಆತನ ಮೇಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಎಸ್‌ಐಟಿ 2024ರಲ್ಲಿ ಆತನನ್ನು ಬಂಧಿಸಿತ್ತು. ಬಳಿಕ ಜೈಲಿನಿಂದ ಪರಾರಿಯಾಗಿದ್ದ ಆತನನ್ನು ಕೇರಳದಲ್ಲಿ ಬಂಧಿಸಲಾಗಿತ್ತು. ಎಸ್‌ಐಟಿ ಅಧಿಕಾರಿಗಳು ಕಾರವಾರಕ್ಕೆ ಆಗಮಿಸಿ ಆತನಿಗೆ ಸೇರಿದ ಫ್ಲಾಟ್‌ಗಳನ್ನು ಸೀಜ್‌ ಮಾಡಿದ್ದರು.

ಈ ಪ್ರಕರಣವನ್ನು ಪ್ರಸಕ್ತ ವರ್ಷದ ಜುಲೈನಲ್ಲಿ ಇಡಿ ತನಿಖೆಗೆ ಕೈಗೆತ್ತಿಕೊಂಡಿದ್ದು, ಸಿದ್ದಿಕ್‌ ಖಾನ್‌ನನ್ನು ಬಂಧಿಸಿತ್ತು. ಅಕ್ರಮ ಹಣ ವರ್ಗಾವಣೆ ಮೂಲಕ ಸುಮಾರು ₹300 ಕೋಟಿ ಮೌಲ್ಯದ 25 ಹೆಕ್ಟೇರ್‌ ಭೂಮಿಯನ್ನು ಖರೀದಿಸಿರುವ ಆರೋಪದ ಹಿನ್ನೆಲೆಯಲ್ಲಿ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಇದೇ ಪ್ರಕರಣದ ಮುಂದುವರಿದ ತನಿಖೆಯ ಭಾಗವಾಗಿ ಕಾರವಾರದ ಫ್ಲಾಟ್‌ಗಳ ಮೇಲೆ ಇಡಿ ಅಧಿಕಾರಿಗಳು ಶೋಧ ನಡೆಸಿದ್ದು, ಆಸ್ತಿ ದಾಖಲೆಗಳು ಹಾಗೂ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಿದ್ದಾರೆ.

Share this...

Releated Posts

ಸಾಲಗಾರನ ಕಾಟಕ್ಕೆ ಒಂದೇ ಕುಟುಂಬ ಮೂವರ ಬಲಿ

Share this...

Share this… Facebook Whatsapp ಬೆಂಗಳೂರು : ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ತನ್ನ ಮಗನಿಗೆ ವಿಷವಿಕ್ಕಿ ತಾಯಿ ಆತ್ಮ*ತ್ಯೆ ಮಾಡಿಕೊಂಡರೆ, ಕಣ್ಮುಂದೆಯೇ ಮೊಮ್ಮಗನ ಸಾವಿನ…

Share this...
ByByNaik Dec 9, 2025

ಮಾಜಾಳಿಯಲ್ಲಿ ಸಿಕ್ಕಿತು ಒಂದು ಕೋಟಿ ರೂಪಾಯಿ ಹಣ

Share this...

Share this… Facebook Whatsapp ಕಾರವಾರ (28 october 2025) :- ಖಾಸಗಿ ಬಸ್ ನಲ್ಲಿ ದಾಖಲೆ ಇಲ್ಲದೆ ಗೋವಾ (goa)ದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ…

Share this...
ByByNaik Oct 28, 2025

Mumbai Crime : मुंबई हादरली; काळाचौकी येथे भररस्त्यात तरुणीवर वार, तरुणाने स्वतःचा गळा चिरला

Share this...

Share this… Facebook Whatsapp भाऊबीजेच्या दुसऱ्याच दिवशी सकाळी मुंबईतील लालबाग काळाचौकी(Lalbaug Kalachowki) परिसरात मुंबईला हादरवून सोडणारी घटना घडली…

Share this...
ByByRupesh sawant Oct 24, 2025

Leave a Reply

Your email address will not be published. Required fields are marked *

Scroll to Top